| ಕ್ರ.ಸಂ. |
ಕಾರ್ಯಗಳು |
೧೯೫೯ರ ಕಾಯ್ದೆಯಲ್ಲಿ |
೧೯೯೭ರ ಕಾಯ್ದೆಯಲ್ಲಿ |
| ೦೧. |
ನೋಂದಣೆ |
ನಿಬಂಧಕರು |
ನಿಬಂಧಕರು |
| ೦೨. |
ಉಪವಿಧಿಗಳ ತಿದ್ದುಪಡಿ ಹಾಗೂ ನೋಂದಣಿ |
ಸಾಮಾನ್ಯ ಸಭೆಯ ನಿರ್ಣಯದಂತೆ ನಿಬಂಧಕರು ನೋಂದಣೆ ಮಾಡುತ್ತಾರೆ. ನಿಬಂಧಕರು ನೇರವಾಗಿ ಉಪವಿಧಿಗಳ ತಿದ್ದುಪಡಿ ಮಾಡಿ ಆದೇಶ ನೀಡಲು ಅವಕಾಶ ಇದೆ. |
ಸಾಮಾನ್ಯ ಸಭೆಯ ನಿರ್ಣಯದಂತೆ ನಿಬಂಧಕರು ನೋಂದಣೆ ಮಾಡುತ್ತಾರೆ. ಈ ಅವಕಾಶ ಇರುವುದಿಲ್ಲ. |
| ೦೩. |
ಆಡಳಿತ ಸಮಿತಿ ರದ್ಧಿತಿ. |
ನಿಬಂಧಕರು |
ಸಂಯುಕ್ತ ಸಹಕಾರಿ |
| ೦೪. |
ಪೂರಕ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳೊಡನೆ ಸಹೋಧ್ಯಮ/ಪಾಲುಗಾರಿಕೆ ಪ್ರಾರಂಭಿಸಲು ಅವಕಾಶ |
ಅವಕಾಶ ಇರುವುದಿಲ್ಲ |
ಅವಕಾಶವಿದೆ. |
| ೦೫. |
೫ ಅಥವಾ ಹೆಚ್ಚು ಸಹಕಾರಿಗಳು ಸೇರಿ ಒಕ್ಕೂಟ ರಚಿಸಲು ಹಾಗೂ ಚಟುವಟಿಕೆ ನಡೆಸಲು ಅವಕಾಶ. |
ಅವಕಾಶ ಇರುವುದಿಲ್ಲ |
ಅವಕಾಶವಿದೆ. |
| ೦೬. |
ಮೇಲ್ವಿಚಾರಣೆ/ಉಸ್ತುವಾರಿ/ ನಿಯಂತ್ರಣ. |
ನಿಬಂಧಕರು/ ಸಂಬಂಧಿಸಿದ ಕೇಂದ್ರ ಸಂಸ್ಥೆಗಳು/ಹಣಕಾಸಿನ ಸಂಸ್ಥೆಗಳು |
ಸಂಯುಕ್ತ ಸಹಕಾರಿ |
| ೦೭. |
ಲೆಕ್ಕ ಪರಿಶೋಧನೆ. |
ಸಹಕಾರಿ ಆಡಿಟ್ ಇಲಾಖೆಯಿಂದ |
ಸಂಯುಕ್ತ ಸಹಕಾರಿಯ ಪಟ್ಟಿಯಲ್ಲಿನ ಚಾರ್ಟರ್ಡ್ ಅಕೌಂಟಂಟ್ ಗಳಿಂದ |
| ೦೮. |
ಲೆಕ್ಕ ಪರಿಶೋಧಕರ ಉಪಸ್ಥಿತಿ ಸಾಮಾನ್ಯ ಸಭೆಯಲ್ಲಿ. |
ಅವಕಾಶ ಇರುವುದಿಲ್ಲ |
ಅವಕಾಶವಿದ್ದು ಅಗತ್ಯವಿದ್ದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. |
| ೦೯. |
ಲೆಕ್ಕಪರಿಶೋಧನಾ ವರದಿಗೆ ಅನುಪಾಲನಾ ವರದಿ |
ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ನಿಬಂಧಕರಿಗೆ ಕಳುಹಿಸಬೇಕು. |
ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಬೇಕು. |
| ೧೦. |
ಸದಸ್ಯತ್ವ. |
ನಿರ್ದೇಶನ ನೀಡಲು ನಿಬಂಧಕರಿಗೆ ಅವಕಾಶ. |
ನಿರ್ದೇಶನ ನೀಡಲು ನಿಬಂಧಕರಿಗೆ ಅವಕಾಶವಿಲ್ಲ. |
| ೧೧. |
ವಿಚಾರಣೆ ಮತ್ತು ತನಿಖೆ. |
ನಿಬಂಧಕರು |
ಆಡಳಿತ ಸಮಿತಿಯ ೧/೩ ಸದಸ್ಯರ, ಸಹಕಾರಿಯ ೧/೧೦ ಸದಸ್ಯರ ಕೋರಿಕೆಯ ಮೇರೆಗೆ ಮಾತ್ರ ನಿಬಂಧಕರು ವಿಚಾರಣೆ/ತನಿಖೆ ಮಾಡಬಹುದು. |
| ೧೨. |
ಆಸ್ತಿ ಖರೀದಿ ಅಥವಾ ವಿಲೇವಾರಿ |
ನಿಬಂಧಕರ ಅನುಮತಿ ಅಗತ್ಯ |
ಸಾಮಾನ್ಯ ಸಭೆಯ ಅನುಮೋದನೆ ಸಾಕು, ನಿಬಂಧಕರ ಅನುಮತಿ ಅಗತ್ಯವಿಲ್ಲ. |
| ೧೩. |
ಚುನಾವಣೆಗಳು |
ಮುಂದೂಡಲು ಸರ್ಕಾರಕ್ಕೆ ಅವಕಾಶವಿದೆ. |
ಅವಕಾಶವಿಲ್ಲ |
| ೧೪. |
ನಿರ್ದೇಶನ ನೀಡುವ ಅಧಿಕಾರ |
ನಿಬಂಧಕರಿಗೆ/ಸರ್ಕಾರಕ್ಕೆ ಇದೆ. |
ನಿಬಂಧಕರಿಗೆ/ಸರ್ಕಾರಕ್ಕೆ ಇಲ್ಲ. |
| ೧೫. |
ಪರಿಶೀಲನೆ. |
ಸಹಕಾರಿ ಇಲಾಖೆ/ಕೇಂದ್ರ ಸಂಸ್ಥೆಗಳು |
ಸಂಯುಕ್ತ ಸಹಕಾರಿ. |
| ೧೬. |
ವಿವಾದಗಳ ಇತ್ಯರ್ಥ |
ನಿಬಂಧಕರು |
ನಿಬಂಧಕರು |
| ೧೭. |
ಸಿಬ್ಬಂದಿಗಳ ವೃಂದಬಲ, ವೇತನ ಶ್ರೇಣಿ, ನೇಮಕಾತಿ, ಬಡ್ತಿ |
ಸರ್ವ ಸದಸ್ಯರ ಅನುಮೋದನೆ ಒಳಪಟ್ಟು ಆಡಳಿತ ಮಂಡಳಿ ನಿರ್ಣಯಿಸುತ್ತದೆ. ನಿಬಂಧಕರ ಅನುಮೋದನೆ ಅಗತ್ಯ. |
ಸರ್ವ ಸದಸ್ಯರ ಅನುಮೋದನೆ ಒಳಪಟ್ಟು ಆಡಳಿತ ಮಂಡಳಿ ನಿರ್ಣಯಿಸುತ್ತದೆ. |
| ೧೮. |
ಬ್ಯಾಂಕುಗಳ ವ್ಯವಹಾರ |
ಡಿಸಿಸಿ ಬ್ಯಾಂಕ್ ಜೊತೆಗೆ ಹಾಗೂ ನಿಬಂಧಕರ ಅನುಮತಿಯೊಂದಿಗೆ ಅನುಸೂಚಿತ ಇತರೆ ಬ್ಯಾಂಕುಗಳ ಜೊತೆ ವ್ಯವಹರಿಸಬಹುದು. |
ಬ್ಯಾಂಕ್ ವ್ಯವಹಾರಕ್ಕೆ ಮುಕ್ತ ಅವಕಾಶ. |
| ೧೯. |
ಸರ್ಕಾರದ ನೆರವು ಹಾಗೂ ಹಸ್ತಕ್ಷೇಪ |
ಅಗತ್ಯವೆನಿಸಿದಲ್ಲೆಲ್ಲ ಸರ್ಕಾರದ ನೆರವು ಪಡೆಯಲು ಅವಕಾಶ. ಅದರಂತೆ ಹಸ್ತಕ್ಷೇಪಕ್ಕೂ ಪೂರ್ಣ ಅವಕಾಶ. |
ಸರ್ಕಾರದ ನೆರವಿಗೆ ಹಾಗೂ ಹಸ್ತಕ್ಷೇಪಗಳಿಗೆ ಅವಕಾಶವಿಲ್ಲ |
| ೨೦. |
ಸಮಾಪನ |
ನಿಬಂಧಕರು |
ನಿಬಂಧಕರು |